Wednesday, December 26, 2007

ನಿನಗಾಗಿ

ನೀನಿಲ್ಲದ ದಿನ ದಿನವಾಗುತ್ತಿಲ್ಲ ಎನಗಿಂದು
ನೀ ಕೇಳಲಿಲ್ಲ... ನಾ ಬಯಸಲಿಲ್ಲ
ಅರಳಿದ ಆಸೆಗೆ ಅರ್ಥ ಕೊನೆಗೂ ಮೂಡಿತು
ನೀನಿಲ್ಲದ ದಿನ ದಿನವಾಗುತ್ತಿಲ್ಲ ಎನಗಿಂದು

ಎದೆಯಲ್ಲಿ ಚಿಮ್ಮಿದ ಈ ಪ್ರೀತಿಗೆ
ಹೋಲಿಕೆ ನೀಡಲು ನನಗೆ ಆಗದಾಗಿದೆ
ಬಣ್ಣಿಸಲು ಪದಗಳೇ ಸಿಗುತ್ತಿಲ್ಲ
ನೀನಿಲ್ಲದ ದಿನ ದಿನವಾಗುತ್ತಿಲ್ಲ ಎನಗಿಂದು

ಮನ ತುಂಬ ನೀ ಇರಲು
ಎನೊ ಉಲ್ಲಾಸ ... ಎನೊ ಸಂತಸ
ಕಾರಣ ತಿಳಿಯಲು ನೀ ಬರುವೆಯ ಸನಿಹ..
ನೀನಿಲ್ಲದ ದಿನ ದಿನವಾಗುತ್ತಿಲ್ಲ ಎನಗಿಂದು

ಎಣಿಸಲಿಲ್ಲ ನನ್ನ ಬಾಳಲ್ಲಿ ಈ ದಿನ
ನನ್ನ ನಾನೇ ನಂಬಲಾರೆನು
ನನ್ನಲ್ಲಿ ನೀ ಹುದುಗಿರಲು...
ನೀನಿಲ್ಲದ ದಿನ ದಿನವಾಗುತ್ತಿಲ್ಲ ಎನಗಿಂದು

1 Comments:

Blogger Pramod P T said...

ಪ್ರಿಯ ಕುಂದಾ..
'ಅರಳಿದ ಆಸೆಗೆ ಅರ್ಥ ಕೊನೆಗೂ ಮೂಡಿತು'
ತುಂಬಾ ಸಂತೋಷ!! ನಿನ್ನ ಪ್ರೀತಿ ಎಂದೆಂದಿಗೂ ಹೀಗೆ ಇರಲಿ.

8:54 PM  

Post a Comment

Subscribe to Post Comments [Atom]

<< Home